Vichara

Ugabhoga

shiva-in-meditation1

ಉಗಾಭೋಗ:
ನಿನ್ನನೆ ಪಾಡುವೆ ನಿನ್ನನೆ ಪೊಗಳುವೆ
ನಿನ್ನನೆ ಬೇಡಿ ಬೇಸರಿಸುವೆ
ನಿನ್ನ ಕಾಲನು ಪಿಡಿವೆ
ನಿನ್ನ ತೊಂಡರಿಗೆ ಕೈಗೊಡುವೆ
ನಿನ್ನಂತೆ ಸಾಕಬಲ್ಲದೇವರಿನ್ನುಂಟೆ
ಚೆನ್ನ ಪುರಂದರವಿಠಲ ದೇವರ ದೇವ ||

ಆತನ ಪಾಡುವೆ ಅನವರತ
ಪ್ರೀತಿಯಿಂದಲಿ ತನ್ನ ಭಕುತರ ಸಲಹುವ ||ಪ.||

ಆವಾತನ ಕೀರ್ತಿ ಪರೀಕ್ಷಿತ ಕೇಳಿ ಪಾವನನಾದನು ಮೂಜಗವರಿಯ
ಭಾವ ಶುದ್ಧಿಯಲಿ ಶುಕನ್ಯಾರ ಪೊಗಳುವ ಆವಾಗ ಪ್ರಹ್ಲಾದನ್ಯಾರ ನೆನೆವನಯ್ಯ ||1||

ಶಿಲೆಯ ಬಾಲೆಯ ಮಾಡಿದ ಪಾದವ್ಯಾರದು ನಳಿನ ಸಂಭವನ ಪೆತ್ತವನ್ಯಾರು
ಕಲಿಯುಗದಿ ಜನರಿಗೆ ಯಾರ ನಾಮವೆ ಗತಿ ಇಳೆಯ ಭಾರವನಿಳುಹಿ ಸಲಹಿದನ್ಯಾರಯ್ಯ ||2||

ದ್ರುಪದನ ಸುತೆಯಭಿಮಾನ ರಕ್ಷಕನ್ಯಾರು ನೃಪ ಧರ್ಮಜಗೆ ರಕ್ಷಕನ್ಯಾರು
ಕೃಪೆಯಿಂದ ವಿದುರನ ಮನೆಯಲುಂಡವನ್ಯಾರು ಆಪತ್ಕಾಲದಿ ಗಜನ ಸಲಹಿದನ್ಯಾರಯ್ಯ ||3||

ಅತಿಶಯದಿಂದ ಅರ್ಜುನಗೆ ಸಾರಥಿಯಾಗಿ ರಥವನೇರಿ ನಡೆಯಿಸಿದವನ್ಯಾರು
ಪೃಥ್ವಿಯೆಲ್ಲವ ಬಲಿ ಯಾರಿಗೊಪ್ಪಿಸಿದನು ಮತಿವಂತ ಧ್ರುವನ ರಕ್ಷಕನ್ಯಾರು ಪೇಳಯ್ಯ ||4||

ಸಗರನ ಮಗಳಿಗು ಯಾರ ನಾಮವೆ ಗತಿ ಯೋಗದಿ ನಾರದನು ಯಾರ ಭಜಿಪನು
ರಾಗರಹಿತ ಹನುಮಂತನೊಡೆಯನ್ಯಾರು ಭಾಗವತರ ಪ್ರಿಯ ಪುರಂದರ ವಿಠ್ಠಲ ||5||

2 Comments